Posts

Bheemavva Harapanahalli Bheemavva

Image
 🙏      ಹರಪನಹಳ್ಳಿ ಭೀಮವ್ವನವರು    🙏    ಹರಪನಹಳ್ಳಿ ಭೀಮವ್ವನವರ ಹಾಡುಗಳು   ಶ್ರೀ ಹರಿ ಓಂ ಹರಪನಹಳ್ಳಿಯ ಶ್ರೀ ದಶಬುಜ ಗಣಪತಿಗೆ ನಮಿಸಿ ಈ ಕಾರ್ಯವ ಮಾಡುವ ಶಕ್ತಿ ಆ ವಿಶ್ವಂಭರ ನಮ್ಮೂರ ತಿಮ್ಮಪ್ಪ ಕೊಡಲಿ. ಶ್ರೀ ಭೀಮೇಶಕೃಷ್ಣ ಅಂಕಿತನಾಮ ಮೂಲಕ ಮಹಾ ಸಾಧ್ವಿ ಭೀಮವ್ವನವರು (ಜನನ_ಇಸವಿ 1823ನೇ ಜುಲೈ ಮಾಹೆ 6ನೇ ತಾರೀಖು) ಅಕ್ಷರ ಜ್ಞಾನ ರಹಿತರಾದವರಾದರೂ ದೈವಿಕ ವರದಿಂದ ಅನೇಕ ಅದ್ಭುತವಾದ ಹರಿಕಥಾ ಕೃತಿಗಳ ಸಾರವನ್ನು ಸುಂದರವಾಗಿ ಆಡುಭಾಷೆಯಲ್ಲಿ ಹಾಡುಗಳನ್ನು ರಚಿಸಿದ್ದಾರೆ. ಮಹಾಭಾರತ, ಶ್ರೀಮದ್ಭಾಗವತ, ರಾಮಾಯಣ, ವೇದೋಪನಿಷತ್ಗಳ, ಪುರಾಣ_ಪುಣ್ಯಕಥೆಗಳ, ಪುಣ್ಯಕ್ಷೇತ್ರಗಳ, ಪುಣ್ಯನದಿಗಳ ಹಾಗೂ ಇನ್ನನೇಕ ಮಹಾ ಗ್ರಂಥಗಳ ಸಾರವನೆ ಸವಿಯಾದ ಅಕ್ಷರಗಳ ಮಾಲೆಗಳನ್ನಾಗಿಸಿ ಹರಿಗರ್ಪಿಸಿ ಆ ಸವಿರಸ ಪಾಯಸವನು ನಿಂದಿದೆಲ್ಲಾ ನನ್ದೇನಿಲ್ಲವೆಂದು ಸಾರ್ಥಕವಾದ ಎಂಭತ್ತು ವರ್ಷಗಳೂ ಹರಿ ವಾಯು ಗುರುಗಳ ಸೇವಿಸಿ ಪೂಜಿಸಿ ಪಾರಾಯಣ ಮಾಡಿದ ಅವ್ವ  ಭೀಮೇಶಕೃಷ್ಣಾರ್ಪಣವೆನ್ನುತ್ತಲೇ ಮುಕ್ಕೋಟಿ ದ್ವಾದಶಿಯಂದು ಗಂಗಾಜನಕನಪಾದದಲ್ಲಿ ಮುಕ್ತಿಯನ್ನು  ಪಡೆದರು ( ಮುಕ್ತಿ_ಇಸವಿ 1903 ನೇ ಮುಕ್ಕೋಟಿ ದ್ವಾದಶಿ ). ಅಂದಿನಿಂದ ಇಂದಿನವರೆಗೂ ಅವ್ವನವರು ಅವರ ಕೃತಿಗಳ ಮೂಲಕ ನಮ್ಮನ್ನು ಹಾರೈಸುತ್ತಾ ಆಶೀರ್ವಾದ ರೂಪದಲ್ಲಿ ಎಲ್ಲರ ಹೃದಯಚಿತ್ತವನ್ನು ಭೀಮೇಶಕೃಷ್ಣನೆಡೆಗೆ ದಾರಿ ತೋರುತ್ತಲಿದ್...